ಪದ್ಮಾವತಿ (eBook) - agnicart

ಪದ್ಮಾವತಿ (eBook)

Vendor
Agniveer India Store
Regular price
Rs. 160.00
Sale price
Rs. 160.00

This product is for purchase through Indian currency only. If you are using another currency, please visit this link

Authors : Sanjeev Newar, Vashi Sharma
Pages : 147
Version : eBook - PDF
 
About the Book  

ಈ ಪುಸ್ತಕವು ನಮ್ಮ ಭಾರತದ ಇತಿಹಾಸದಲ್ಲಿ ಮರೆಮಾಚಲಾಗಿದ್ದ ಅಧ್ಬುತವಾದ ರೋಚಕ ನಮ್ಮ ಬೆನ್ನು ಹುರಿಯಲ್ಲಿ ಮಿಂಚಿನ ಸಂಚಾರವನ್ನು ತರುವ ಕಥೆಗಳ ಸಂಗ್ರಹವಾಗಿದೆ.

ಭಾರತಿಯ ಮಕ್ಕಳು ಶಾಲೆಯಲ್ಲಿ ಅಪಾಯಕಾರಿ ವಿಚಿತ್ರ ಸಂಗತಿಗಳನ್ನು ಇತಿಹಾಸ ಎನ್ನುವ ತಲೆಬರಹದ ಹೆಸರಿನಲ್ಲಿ ಕಲಿಯುತ್ತಾರೆ. ನಾವು ಯಾರು ಎಂಬುವುದರ ಮಹಾಗಾಥೆಯೆಂದು ಹಿದುಗಳನ್ನು ಸಾವಿರ ವರ್ಷಗಳಿಂದ ಇಸ್ಲಾಂ ಆಕ್ರಮಣಕಾರಿಗಳು ಆಳುತ್ತಿದ್ದಾರೆ ಎನ್ನುವ ಮಿಥ್ಯಾ ಗಾಥೆಯನ್ನು ನಮ್ಮ ಗಂಟಲಲ್ಲಿ ತುರುಕುತ್ತಿದ್ದಾರೆ. ಇಸ್ಲಾಮಿ ಆಕ್ರಮಣವನ್ನು ಅವರ ಆಳ್ವಿಕೆ ಎಂದೂ ಅವರ ಅತ್ಯಾಚಾರ ದುರಾಚಾರದ ಕಾಲವನ್ನು ಹಿಂದೂ ಮುಸ್ಲಿಂ ಸಂಯುಕ್ತ ನಾಗರಿಕತೆಯ ಉದಾಹರಣೆ ಎಂದೂ ವೈಭವಿಕರಿಸಿ ಪ್ರಸರಿಸುತ್ತಿದ್ದಾರೆ. ಹಾಗೆಯೇ ಆಕ್ರಮಣಕಾರಿಗಳನ್ನು ರಕ್ಷಕರೆಂದೂ ಶೂರರೆಂದೂ ಬಿಂಬಿಸುತ್ತಾ ಸತ್ಯವಾಗಿ ನಾಡಿನ ಮಣ್ಣಿನ ಮಕ್ಕಳು ದೇಶಕ್ಕಾಗಿ ಆಕ್ರಮಣಕಾರಿಗಳೊಂದಿಗೆ  ಹೋರಾಡಿದ ವೀರ ಶೂರರನ್ನು ನಮ್ಮ ಇತಿಹಾಸ ಪುಸ್ತಕಗಳಿಂದ ಸಂಪೂರ್ಣವಾಗಿ ಅಳಿಸಿಹಾಕಿದ್ದಾರೆ.

ನಿಮಗೆ ತಿಳಿದಿದೆಯೇ ......

  1. ಒಬ್ಬ ಹಿಂದೂ ಮಹಾರಾಣಿ ಮೊಹಮ್ಮದ್ ಘೋರಿಯನ್ನು ತನ್ನ ಜಿವ ಉಳಿಸಿಕೊಂಡು ಈಗ ಪಾಕಿಸ್ತಾನದಲ್ಲಿರುವ ಮುಲ್ತಾನ್ ವರೆಗೆ ಓಡುವಂತೆ ಮಾಡಿದ್ದಳೆಂದು!!
  2. ಮಹಾರಾಣಿ ಪದ್ಮಾವತಿಯ ಆಜ್ಞೆಯ ಮೇರೆಗೆ ಒಬ್ಬ ರಜಪೂತ ಸೇನಾನಿಯು ಏಕಾಂಗಿಯಾಗಿ ಅನೇಕ ಸಣ್ಣ ಯುದ್ಧಗಳಲ್ಲಿ ಸುಲ್ತಾನ್ ಅಲ್ಲಾ ಉದ್ದೀನ್ ಖಿಲ್ಜಿಯ ಅನೇಕ ಸೇನೆಯನ್ನು ಸೋಲಿಸಿದ್ದನು, ಕೊನೆಗೆ ಅಲ್ಲಾ ಉದ್ದೀನ್ ಖಿಲ್ಜಿಯು ನಗ್ನನಾಗಿ ಜಿವದಾನಕ್ಕಾಗಿ ಭಿಕ್ಷೆ ಬೇಡುವಂತಾಯಿತು!!
  3. ಇನ್ನೊಬ್ಬ ಮಹಾರಾಣಿಯು ಸುಲ್ತಾನ್ ಷಹಜಹಾನ್ ನ್ನು ಮತ್ತೆ ಮತ್ತೆ ಸೋಲಿಸಿ ಮೊಘಲರ ಸೈನಿಕರ ಮೂಗು ಕತ್ತರಿಸಿ ಕಳುಹಿಸಿದ್ದಳು !!
  4. ಒಬ್ಬ ರಜಪೂತನು ತನ್ನ ರಾಣಿ ಮತ್ತು ರಾಜಕುಮಾರರ ಬೆಂಗಾವಲಾಗಿ ಹೋಗಿದ್ದು ಹಿಂದಿರುಗುವಾಗ ಔರಂಗಜೇಬ್ ನ ದೊಡ್ಡ ಸೇನೆಯನ್ನು ಕೇವಲ ಮುನ್ನೂರು ಯೋಧರು ಗ್ರೀಸ್’ನ ‘ಸ್ಪಾರ್ಟನ್’ಗಳಿಗೆ ನಾಚಿಕೆಯಾಗುವಂತೆ ಸೋಲಿಸಿದ್ದರೆಂದು.....
  5. ಮೊಘಲರ ಸೇನೆ ಭೂತವನ್ನು ಕಂಡಂತೆ ಹೆದರುತ್ತಿದ್ದ, ಅಲ್ಲಾ’ನ ಇಚ್ಛೆಗೆ ವಿರುದ್ಧವಾಗಿ ಎಲ್ಲ ಯುದ್ಧಗಳನ್ನೂ ಗೆಲ್ಲುತ್ತಿದ್ದ ಒಬ್ಬ ಹಿಂದೂ ಸೇನಾಪತಿ ಇದ್ದನೆಂದು
  6. ಮೊಘಲರು ಅವನ ದೇಹ ಧಾರ್ಢ್ಯತೆಗೆ ಹೆದರಿ ಆ ಒಬ್ಬ ರಜಪೂತನನ್ನು ಸಿಂಹದ ಪಂಜರದಲ್ಲಿಯೇ ಬಂಧಿಸಬೇಕಾಯಿತು ಎಂದು .....
  7. ಒಮ್ಮೆ ಪಠಾಣರ ಸಂಪೂರ್ಣ ಸೈನ್ಯವೂ ಹಿಂದೂ ಖಾಲ್ಸ ಸೇನಾಪತಿ ಎದುರು ಕತ್ತಿಯನ್ನೂ ಎತ್ತದೆಲೇ ಶರಣಾಯಿತು ಎಂದು...
  8. ಹತ್ತೊಂಭತ್ತನೆಯ ಶತಮಾನದಲ್ಲಿ ಹಿಂದೂ ಖಾಲ್ಸಾ ಸೇನಾಪತಿಯು ಆಫ್ಘಾನಿಸ್ತಾನದ ವರೆಗಿನ ಆಕ್ರಮಣಕಾರಿಗಳ ಎಲ್ಲ ಗಡಿಯನ್ನೂ ಗೆದ್ದಿದ್ದನೆಂದು .......
  9. ಬ್ರಿಟಿಷರು ಬಂದಮೇಲೂ ಲಾಹೋರ್, ಪೆಶಾವರ್, ರಾವಲ್ಪಿಂಡಿ ಮತ್ತು ಇಂದು ಪಾಕಿಸ್ತಾನದಲ್ಲಿ ಇರುವ ಅನೇಕ ಭಾಗಗಳೂ ಹಿಂದೂ ಆಳ್ವಿವಿಕೆಯಲ್ಲಿತ್ತು ಎಂದು....

ಮತ್ತು ಇನ್ನೂ ಅನೇಕ ವಿಚಾರಗಳಿವೆ.

ಈ ಪುಸ್ತಕವು ಶಾಲೆಗಳಲ್ಲಿ ಕಳಿಸಿದ ಸುಳ್ಳು ಇತಿಹಾಸ ಕಥೆಯಿಂದ ನೀವು ಕಳೆದುಕೊಂಡ ಹಿಂದಿನ ವೈಭವ ಮತ್ತು ಆತ್ಮವಿಶ್ವಾಸಗಳನ್ನು ಮರಳಿ ಗಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಕಥೆಗಳನ್ನು ನಿಮ್ಮ ಮಕ್ಕಳಿಗೆ ಅವರನ್ನು ಶತಮಾನಗಳಿಂದಲೂ ಗುಲಾಮರಾಗಿದ್ದವರು ಎಂದೇ ನಂಬಿಸಿ “ಪ್ರೊಗ್ರಾಮ್” ಮಾಡಿ ಬಿಡುವುದಕ್ಕೆ ಮೊದಲೇ ಓದಿ ಹೇಳಿ. ಅವರನ್ನು ಶಾಲೆಯ ಇತಿಹಾಸ ಪುಸ್ತಕಗಳು ಸುಳ್ಳು ಕಥೆಗಳಿಂದ ಮಾನಸಿಕವಾಗಿ ಗುಲಾಮರನ್ನಾಗಿಸುವ ಮೊದಲೇ ಇತಿಹಾಸದ ಸತ್ಯಕಥೆಗಳನ್ನು ಹೇಳಿ ಧೈರ್ಯವಂತರನ್ನಾಗಿಸಿ.